ಕಾರ್ಯಕರ್ತರ ಸಭೆಯಲ್ಲಿ ಮೋತ್ತೊಮ್ಮೆ ಬಿಜೆಪಿ ದೇಯ ವಾಕ್ಯದೊಂದಿಗೆ ರಣ ಕಹಳೆ ಮೊಳಗಿಸಿದ ಪಿಸಿ ಮೋಹನ್….!

ಕಾರ್ಯಕರ್ತರ ಸಭೆಯಲ್ಲಿ ಮೋತ್ತೊಮ್ಮೆ ಬಿಜೆಪಿ ದೇಯ ವಾಕ್ಯದೊಂದಿಗೆ ರಣ ಕಹಳೆ ಮೊಳಗಿಸಿದ ಪಿಸಿ ಮೋಹನ್….!

ಬೆಂಗಳೂರು: ಬೆಂಗಳೂರು ಕೇಂದ್ರ ಸಂಸದರಾಗಿ ಸರ್ವಜ್ಞ ನಗರ ಕ್ಷೆತ್ರದಲ್ಲಿ ಸಾಕಷ್ಟು ಜನಪ್ರಿಯ ಕಾರ್ಯಗಳನ್ನು ಮಾಡಿ, ಬಯ್ಯಪ್ಪನಹಳ್ಳಿ ಬಳಿ ನೂತನವಾಗಿ ನಿರ್ಮಿಸಲಾಗಿರುವ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದ ನಿರ್ಮಾತರೆಂದೇ ಖ್ಯಾತಿ ಪಡೆದಿರುವ ಪಿಸಿ ಮೋಹನ್ ರವರು ಸದಾ ಸೌಮ್ಯ ಸ್ವಭಾವದ ವ್ಯಕ್ತಿಯಾಗಿ ನಿಸ್ಕಲ್ಮಷ ವ್ಯಕ್ತಿಯಾಗಿದ್ದು ಕ್ಷೇತ್ರದ ಜನರ ಪ್ರೀತಿಗಳಿಸಿದ್ದಾರೆ.

ಪಿಸಿ ಮೋಹನ್ ಈ ಬಾರಿಯು ಕೇಂದ್ರ ಸಂಸದ ಸ್ಥಳಕ್ಕೆ ಸ್ಪರ್ಧೆ ಮಾಡಿದ್ದು ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದಾ ಕಾರ್ಯ ಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಪಕ್ಷದ ಎಲ್ಲಾ ಮುಖಂಡರ ವಿಶ್ವಾಸಗಳಿಸಿಕೊಂಡು ಕೇಂದ್ರ ಬಾಗದಲ್ಲಿ ತನ್ನದೇ ಆದ ಚಾಪು ಮೂಡಿಸಿಕೊಂಡಿದ್ದಾರೆ.

ಈ ಬಾರಿಯು ಅಭ್ಯರ್ಥಿಯಾಗಿದ್ದು ಮತ್ತೆ ನರೇಂದ್ರ ಮೂದಿಯವರನ್ನು ಪ್ರಧಾನಿ ಮಾಡಿ ದೇಶವನ್ನು ವಿಶ್ವ ಶಕ್ತಿಯಾಗಿ ಮಾಡಲು ಕಮಲ ಪಕ್ಷದ ತತ್ವ ಸಿದ್ಧಾಂತಗಳನ್ನು ಜನರಿಗೆ ಮನವರಿಕೆ ಮಾಡಲು ಬೂತ್ ಮಟ್ಟದ ಕಾರ್ಯಕರ್ತರ ಸಭೆಗಳನ್ನು ಏರ್ಪಡಿಸಿ ಚುನಾವಣೆ ತಂತ್ರಗಾರಿಕೆ ಮತ್ತು ಜನರನ್ನು ಸೆಳೆಯುವ ಹಾಗೂ ನರೇಂದ್ರ ಮೋದಿಯವರ ಕಾರ್ಯಸಾಧನೆ ಬಗ್ಗೆ ಮತದಾರರ ಮನದಲ್ಲಿ ತುಂಬಿ ಅವರ ವಿಶ್ವಾಸ ಗಳಿಸುವಂತೆ ಕರೆ ನೀಡುತ್ತಿದ್ದಾರೆ ಅದರಂತೆ ಇಂದು ಸಹ ಸರ್ವಜ್ಞ ನಗರ ಕ್ಷೆತ್ರದಲ್ಲಿ ಬಾಣಸವಾಡಿ ಶ್ರೀ ಸೀತಾ ರಾಮ ಕಲ್ಯಾಣ ಮಂಟಪದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು.

 

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಂಡಲ ಅಧ್ಯಕ್ಷ ಶ್ರೀ ಮುನಿರಾಜ್ ಕಾರ್ಣಿಕ್, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ರಾಘವೇಂದ್ರ ರಾವ್, ಶ್ರೀ ಎಂಎನ್ ರೆಡ್ಡಿ, ಮಾಜಿ ಕಾರ್ಪೋರೇಟರ್ಗಳಾದ ಶ್ರೀ ಮಂಜುನಾಥ್, ಶ್ರೀ ಗೋವಿಂದರಾಜ್, ಶ್ರೀ ಎಂ ಸಿ ಶ್ರೀನಿವಾಸ್, ಶ್ರೀ ಕೋದಂಡ ರೆಡ್ಡಿ, ಶ್ರೀ ಶ್ರೀನಿವಾಸ್, ಬಿಜೆಪಿ ಬೆಂಗಳೂರು ಕೇಂದ್ರ ಯುವ ಮೋರ್ಚಾ ಅಧ್ಯಕ್ಷ ಶ್ರೀ ಅಭಿಲಾಷ್ ರೆಡ್ಡಿ, ಶ್ರೀಮತಿ. ಭಾರತಿ, ಶ್ರೀ ಅಣ್ಣಯ್ಯ, ಮಂಡಲ ಜಿಎಸ್ ಶ್ರೀ ದ್ವಾರಕೀಶ್, ಶ್ರೀ ಶ್ರೀಹರಿ, ಶ್ರೀ ಕಿರಣ್, ಶ್ರೀ ಪ್ರಶಾಂತ್, ಪಕ್ಷದ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here

ಇತ್ತೀಚಿನ ಪೋಸ್ಟ್

ಐರ್ಲೆಂಡ್ ವಿರುದ್ಧ ಭಾರತದ ಹೀನಾಯ ಸೋಲು

ವಿಶ್ವ ಚಾಂಪಿಯನ್ ಭಾರತಕ್ಕೆ ಬೆಲ್ಫಾಸ್ಟ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಘಾತ...

ನನ್ನವಳು ಹೇಗಿರಬೇಕು ಗೊತ್ತಾ?

ನನಗಿನ್ನೂ ಮದುವೆ ಆಗಿಲ್ಲ, ಸದ್ಯಕ್ಕೆ ಸಿಂಗಲ್ ಹಕ್ಕಿ. ಮದುವೆ ಬಗ್ಗೆ ನನಗೂ...

ಖಾನ್ ಸರ್ ಕೋಚಿಂಗ್ ಸೆಂಟರ್ ಧ್ವಂಸ ಪ್ರಕರಣ: ಆರೋಪಿಯಾಗಿದ್ದ ಪ್ರಿನ್ಸ್ ಯಾದವ್ ನೇಪಾಳದಲ್ಲಿ ಮೃತ

ಪಾಟ್ನಾದ ಖ್ಯಾತ ಶಿಕ್ಷಣತಜ್ಞ ಖಾನ್ ಸರ್ (ಫೈಸಲ್ ಖಾನ್) ಅವರ ಕೋಚಿಂಗ್...

ಯುವಕರ ವಿಶಿಷ್ಟ ಸಾಧನೆ: ಹಳೆಯ ಬಸ್ ಅನ್ನು ಬಸ್ ನಿಲ್ದಾಣವನ್ನಾಗಿ ಪರಿವರ್ತಿಸಿದ V2 ಗಾಯ್ಸ್” ತಂಡ

ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಸಮೀಪದ ಬಂಡಸಾಲೆಯಲ್ಲಿ ಯುವಕರ ತಂಡವೊಂದು ಕೈಗೊಂಡಿರುವ...

ವಿಷಯಗಳು

ಐರ್ಲೆಂಡ್ ವಿರುದ್ಧ ಭಾರತದ ಹೀನಾಯ ಸೋಲು

ವಿಶ್ವ ಚಾಂಪಿಯನ್ ಭಾರತಕ್ಕೆ ಬೆಲ್ಫಾಸ್ಟ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಘಾತ...

ನನ್ನವಳು ಹೇಗಿರಬೇಕು ಗೊತ್ತಾ?

ನನಗಿನ್ನೂ ಮದುವೆ ಆಗಿಲ್ಲ, ಸದ್ಯಕ್ಕೆ ಸಿಂಗಲ್ ಹಕ್ಕಿ. ಮದುವೆ ಬಗ್ಗೆ ನನಗೂ...

ಸಂಬಂಧಿತ ಲೇಖನಗಳು

ಜನಪ್ರಿಯ ಲೇಖನಗಳು

ಇತ್ತೀಚಿನ ಪೋಸ್ಟ್